Quantcast
Channel: Vishwa Samvada Kendra – Vishwa Samvada Kendra
Viewing all articles
Browse latest Browse all 1926

ಸುಕೃಪಾ ಟ್ರಸ್ಟ್ ಹಾಗೂ ರಾಷ್ಟ್ರ ಸೇವಿಕಾ ಸಮಿತಿ ಆಯೋಜಿಸಿದ ‘ಮೇರಾ ಪರಿವಾರ್-ಆನಂದೀ ಪರಿವಾರ್’ಕಾರ್ಯಕ್ರಮ

$
0
0

೧೨ ಜನವರಿ ೨೦೧೯, ಬೆಂಗಳೂರು: ಮೇರಾ ಪರಿವಾರ್ – ಆನಂದೀ ಪರಿವಾರ್ ಕಾರ್ಯಕ್ರಮವು ನಗರದ ಬಸವನಗುಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಆಯೋಜಿತವಾಗಿತ್ತು. ಸುಕೃಪಾ ಟ್ರಸ್ಟ್ ಹಾಗೂ ರಾಷ್ಟ್ರ ಸೇವಿಕಾ ಸಮಿತಿಯವರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ೫೦೦ಕ್ಕೂ ಹೆಚ್ಚು ಜನರು ಭಾಗವಹಿಸಿದರು.

೧೯೯೨ರಲ್ಲಿ ಸ್ಥಾಪಿತವಾದ ಸುಕೃಪಾ ಟ್ರಸ್ಟ್ ಮಹಿಳೆಯರಿಂದಲೇ ಆರಂಭವಾದದ್ದು. ಟ್ರಸ್ಟ್ ನ ವತಿಯಿಂದ ಹಲವಾರು ಸೇವಾ ಪ್ರಕಲ್ಪಗಳು ಯೋಜಿತವಗಿವೆ, ಮಕ್ಕಳಿಗಾಗಿ ಶಿಶು ಮಂದಿರ, ಶಾರದಾ ಶಾಲೆ, ಯುವತಿಯರಿಗಾಗಿ ಹಾಸ್ಟೆಲ್, ಮಹಿಳೆಯರಿಗಾಗಿ ಯೋಗ, ಹೊಲಿಗೆ ಮತ್ತು ಸ್ವಸಹಾಯ ಕೇಂದ್ರಗಳನ್ನು ನಡೆಸುತ್ತಿವೆ ಎಂದು ಶ್ರೀಮತಿ ಸಾವಿತ್ರಿ ಸೋಮಯಾಜಿಯವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.

ಮೊದಲನೆಯ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಸಂಪರ್ಕ ಪ್ರಮುಖರಾದ ಶ್ರೀ ವೆಂಕಟೇಶ್ ಅವರು “ಅವಶ್ಯಕತೆ ಮತ್ತು ಅಭಿಲಾಷೆ” ವಿಷಯದ ಕುರಿತು ಮಾತನಾಡುತ್ತಾ, ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಹಾಗೂ ಯೋಗವೇ ನಮ್ಮ ಜೀವನ ಶೈಲಿಯಾಗಬೇಕೆಂದು ತಿಳಿಸಿದರು.

ಕುಟುಂಬ ಪ್ರಬೋಧನ್ ಪ್ರಮುಖರಾದ ಶ್ರೀ ಸತೀಶ್ ಅವರು “ಪರಿವಾರದಲ್ಲಿನ ಸಂತುಲನ ಮತ್ತು ವೃತ್ತಿ ಜೀವನ” ವಿಷಯದ ಮಂಡನೆ ಮಾಡುತ್ತ ಕೇವಲ ವೃತ್ತಿಗೆ, ಕೀರ್ತಿಗೆ ಹೆಚ್ಚು ಸಮಯ ಕೊಡುವುದರ ಜೊತೆ ಮನೆಯ ಮಕ್ಕಳಿಗೂ ಸಮಯ ಕೊಡಬೇಕೆಂದು ಆಗ್ರಹ ಮಾಡಿದರು. ವೃತ್ತಿಯಲ್ಲಿ ವಕೀಲರಾದ ಕ್ಷಮಾ ನರಗುಂದ ಮಾತನಾಡುತ್ತಾ ಪರಿವಾರದ ಸದಸ್ಯರ ನಡುವೆ ಇರಬೇಕಾದ್ದು ಪ್ರೀತಿ, ಪ್ರೇಮ, ವಿಶ್ವಾಸ, ನಂಬಿಕೆ ಮುಂತಾದುವುಗಲೇ ಹೊರತು ಅಧಿಕಾರವನ್ನು ಚಲಾಯಿಸುವ ಗುಣವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಎರಡನೆಯ ಅವಧಿಯಲ್ಲಿ ಆಯುರ್ವೇದ ತಜ್ಞರಾದ ಡಾ|| ಉಷಾ ಅವರ ಸಾರಥ್ಯದಲ್ಲಿ ’ಅಧಿಜನನ ಮತ್ತು ಸಂವರ್ಧನ’ ಎಂಬ ಬಗ್ಗೆ, ದಿಶಾ ಸಂಯೋಜಕರಾದ ಶ್ರೀಮತಿ ರೇಖಾ ರಾಮಚಂದ್ರರ ನೇತೃತ್ವದಲ್ಲಿ ಕೂಡಿಬಾಳೋಣ – ಸಾಥ್ ರಹೇ ಸಾಥ್ ಜಿಯೋ ವಿಷಯದ ಬಗ್ಗೆ, ಹಾಗೂ ಆಯುರ್ವೇದ ತಜ್ಞರಾದ ಡಾ|| ವಾಣಿಶ್ರೀ ಎಸ್. ಕೆ ಅವರು ’ಆಹಾರ ಮತ್ತು ವಿಹಾರ’ ವಿಷಯದ ಬಗ್ಗೆ ಚರ್ಚಾಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಅಲಕಾ ಇನಾಂದಾರ್ ಅವರು ಮನೆ ಅಥವಾ ಪರಿವಾರ ಎಲ್ಲಾ ಸಾಧನೆಗಳ ಸಾಧನವಾಗಿದ್ದು ಸಮಾಜ ಜೀವನ ಆರಂಭವಾಗುವುದು ಮನೆಯಿಂದ ಎಂದು ತಿಳಿಸಿದರು. ಋಣದಿಂದ ಕರ್ತವ್ಯ ಪ್ರಜ್ಞೆ ಹುಟ್ಟುತ್ತದೆ ಹಾಗೂ ಹಕ್ಕು ಹೋಗಿ ಕರ್ತವ್ಯವಿರಬೇಕೆಂದು ತಿಳಿಸಿದರು. ಪರಿಸರ, ಭೂಮಿ ಇರುವುದು ನಮ್ಮ ಆಸೆಗಳ ಪೂರೈಕೆಗಳಿಗಲ್ಲ. ಇಲ್ಲಿ ಜೀವನ ಶೋಷಣೆಗೆ ಮಹತ್ವ ಸಿಗದೇ ಜೀವನದ ಪೋಷಣೆಗೆ ಮಹತ್ವ ಸಿಗಬೇಕೆಂದು ಹೇಳಿದರು. ’ಕೂಡಿ ಬಾಳೋಣ’ ಎಂಬ ಚಿಂತನೆಯಿಂದ ಪರಿವಾರದ ಅಸ್ತಿತ್ವ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ತಿಳಿಸಿದರು.

ಕಾರ್ಯಕ್ರಮದ ನಿರ್ವಹಣೆ, ಪ್ರಾರ್ಥನೆ, ಗೀತೆ, ವಂದನಾರ್ಪಣೆಯನ್ನು ದಂಪತಿಗಳು ನಡೆಸಿಕೊಟ್ಟದ್ದು ವಿಶೇಷ.


Viewing all articles
Browse latest Browse all 1926

Trending Articles