Quantcast
Channel: Vishwa Samvada Kendra – Vishwa Samvada Kendra
Viewing all articles
Browse latest Browse all 1926

“ಸಕ್ಷಮ’ದಕ್ಷಿಣ ಕರ್ನಾಟಕ ತರಬೇತಿ ಕಾರ್ಯಾಗಾರ

$
0
0

ಕಮಲಶಿಲೆ, 20 ಜನವರಿ 2019:

“ಸಕ್ಷಮ “ದಕ್ಷಿಣ ಕರ್ನಾಟಕ ತರಬೇತಿ ಕಾರ್ಯಾಗಾರ. ದಿವ್ಯಾಂಗರ ಸಬಲೀಕರಣದ ಅಖಿಲ ಭಾರತ ಸಂಘಟನೆ ಸಕ್ಷಮ ದ ,ದಕ್ಷಿಣ ಕರ್ನಾಟಕ , ಕಾರ್ಯಕರ್ತ ಪ್ರಶಿಕ್ಷಣವರ್ಗವನ್ನು ಕುಂದಾಪುರ ತಾಲೂಕಿನ ಶ್ರೀ ಕ್ಷೇತ್ರ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ಕಮಲಶಿಲೆಯಲ್ಲಿ ನಡೆಸಲಾಯಿತು. ಕ್ಷೇತ್ರದ ಧರ್ಮದರ್ಶಿ ಶ್ರೀ ಸಚ್ಚಿದಾನಂದ ಚಾತ್ರ ವರ್ಗವನ್ನು ಉದ್ಘಾಟಿಸಿ ಶುಭಹಾರೈಸಿದರು . ಖ್ಯಾತ ಸಾಮಾಜಿಕ ಹೋರಾಟಗಾರ ಉಡುಪಿಯ ಡಾಕ್ಟರ್ ರವೀಂದ್ರನಾಥ್ ಶಾನುಭಾಗ್ ,ಖ್ಯಾತ ಗೇರುಬೀಜ ಉದ್ಯಮಿ ಗೋಪಿನಾಥ್ ಕಾಮತ್, ಸಕ್ಷಮ ದಕ್ಷಿಣ ಕರ್ನಾಟಕ ಅಧ್ಯಕ್ಷ ಡಾಕ್ಟರ್ ಸುಧೀರ್ ಪೈ, ಸಂಘಟನಾ ಕಾರ್ಯದರ್ಶಿ ಜಯರಾಮ್ ಬೊಳ್ಳಾಜೆ ಉಪಸ್ಥಿತರಿದ್ದರು. ವರ್ಗದಲ್ಲಿ ವಿವಿಧ ವಿಷಯಗಳ ಕುರಿತು ತಜ್ಞರಿಂದ ಕಾರ್ಯಾಗಾರ ನಡೆಯಿತು. ಶ್ರೀ ಸುಧೀಂದ್ರ ಪಾವಗಡ, ಡಾಕ್ಟರ್ ಮುರಳೀಧರ ನಾಯಕ್, ಗಾಯತ್ರಿ ರವೀಶ್, ವರದಾ ಹೆಗಡೆ, ಹರಿಕೃಷ್ಣ ರೈ, ವಿನೋದ್ ಪ್ರಕಾಶ್ ಗೋಷ್ಠಿಗಳಲ್ಲಿ ಮಾರ್ಗದರ್ಶನ ಮಾಡಿದರು. ಇದೇ ಸಂದರ್ಭದಲ್ಲಿ ಕನ್ಯಾಡಿ ಯ ಸೇವಾಧಾಮ ದ ವಿನಾಯಕ ರಾವ್ ,ರಕ್ತದಾನಿ ಮಲ್ಪೆ ನಿತೀಶ್ ನಾಯಕ್ ಇವರನ್ನು ಸನ್ಮಾನಿಸಲಾಯಿತು. ಪ್ರಾಂತ ಕಾರ್ಯದರ್ಶಿ ವಸಂತ ಮಾಧವ, ರಮೇಶ ಪ್ರಭು, ಜಯದೇವ ಕಾಮತ್ ವಿವಿಧ ಗೋಷ್ಠಿಗಳ ನಿರ್ವಹಿಸಿದರು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.


Viewing all articles
Browse latest Browse all 1926

Trending Articles



<script src="https://jsc.adskeeper.com/r/s/rssing.com.1596347.js" async> </script>