Quantcast
Channel: Vishwa Samvada Kendra – Vishwa Samvada Kendra
Viewing all articles
Browse latest Browse all 1926

ಸೌಮ್ಯ , ಶಾಂತ, ಪ್ರಸನ್ನ ಮತ್ತು ಶೀತಲ ವ್ಯಕ್ತಿತ್ವ ನಮ್ಮೆಲ್ಲ ಕಾರ್ಯಕರ್ತರಿಗೆ ಬಹುದೊಡ್ಡ ಆಧಾರವಾಗಿತ್ತು : ಡಾ. ಮೋಹನ್ ಭಾಗವತ್ ಹಾಗೂ ಸುರೇಶ್ ಭೈಯ್ಯಾಜಿ ಜೋಶಿ

$
0
0

ರಾಷ್ಟ್ರೀಯ ಸ್ವಯಂಸೇವಕ ಸಂಘ
ಪ್ರಧಾನ ಕಾರ್ಯಾಲಯ – ಡಾ|| ಹೆಡಗೇವಾರ್ ಭವನ ,

ಪರಮಶ್ರದ್ಧೆಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ವೈಕುಂಠಲೀನರಾದುದು ನಮ್ಮೆಲ್ಲರಿಗೆ ಬಹುದೊಡ್ಡ ನಷ್ಟವಾಗಿದೆ. ದೈವ ಸಂಪದೆಯುಳ್ಳ, ದೇಶ ಮತ್ತು ಧರ್ಮಗಳ ಚಿಂತನೆಯಲ್ಲಿ ನಿತ್ಯ ಪ್ರಯತ್ನರತ ಅವರ ಸೌಮ್ಯ , ಶಾಂತ, ಪ್ರಸನ್ನ ಮತ್ತು ಶೀತಲ ವ್ಯಕ್ತಿತ್ವವು ನಮ್ಮೆಲ್ಲ ಕಾರ್ಯಕರ್ತರಿಗೆ ಬಹುದೊಡ್ಡ ಆಧಾರವಾಗಿತ್ತು.

ಅವರ ಸ್ಪಷ್ಟ ಹಾಗು ಸ್ನೇಹಮಯ ಸಲಹೆಗಳು ಎಂತಹುದೇ ಜಟಿಲ ಸಮಸ್ಯೆಗಳನ್ನು ತುಂಬಾ ಸರಳಗೊಳಿಸುತ್ತಿತ್ತು. ವಟವೃಕ್ಷದ ಶೀತಲ ನೆರಳಿನಂತಿದ್ದ ಅವರ ಸಾನಿಧ್ಯ ಇನ್ನು ನಮಗೆ ದೊರಕಲಾರದು. ಅವರ ಉತ್ಕಟ ಭಾವನೆಗಳ ಇಚ್ಛೆಯ ಸಾಮರ್ಥ್ಯದಿಂದಾಗಿ ಶ್ರೀರಾಮ ಮಂದಿರ ನಿರ್ಮಾಣದ ದಾರಿ ನಿಷ್ಕಂಟಕವಾಯಿತಾದರೂ ಮಂದಿರ ನಿರ್ಮಾಣವಾಗುವ ಮೊದಲೇ ಅವರು ನಮ್ಮಿಂದ ದೂರ ತೆರಳಿದರು. ಯಾವ ತಪಸ್ವಿಗಳ ನಿಷ್ಕಾಮ ತಪಸ್ಸಿನ ಕಾರಣದಿಂದಾಗಿ ಭರತವರ್ಷದ ಪ್ರಾಣಸ್ವರೂಪ ಧರ್ಮಜೀವನವು ಸದಾ ತೇಜಸ್ವಿಯಾಗಿರುವುದೋ, ಅಂತಹ ಆಧ್ಯಾತ್ಮಿಕ ಸಂತರನ್ನು ನಾವು ಪಾರ್ಥಿವ ರೂಪದಲ್ಲಿ ನೋಡಲಾರೆವು. ಆದರೆ, ಅವರ ನೆನಪುಗಳು ಪ್ರೇರಣೆ ಮತ್ತು ಬೆಳಕಾಗಿ ನಮ್ಮೆಲ್ಲರ ಪಥ- ಬೆಳಗುತ್ತಿರುವವು.

ಅವರ ಸ್ಮೃತಿಯಲ್ಲಿ ನಾವು ವೈಯುಕ್ತಿಕವಾಗಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ ವಿನಮ್ರ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇವೆ.

ನಿಮ್ಮವ

ಮೋಹನ್ ಭಾಗವತ್
ಸುರೇಶ (ಭೈಯ್ಯಾ) ಜೋಶಿ

File picture
Sarsanghachalak Dr. Mohan Ji Bhagwat, Sarkaryavah Sri Bhaiyyaji Joshi

 


Viewing all articles
Browse latest Browse all 1926

Trending Articles



<script src="https://jsc.adskeeper.com/r/s/rssing.com.1596347.js" async> </script>