Quantcast
Channel: Vishwa Samvada Kendra – Vishwa Samvada Kendra
Viewing all articles
Browse latest Browse all 1926

50 ವರ್ಷಗಳ ನಂತರ ಮತ್ತೆ ಹಿಂದೂಗಳಾದ ಹೊಸಮನಿ ಕುಟುಂಬ!

$
0
0

ಯಾದಗಿರಿ ತಾಲೂಕಿನಲ್ಲಿ 50ವರ್ಷದ ಹಿಂದೆ ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗಿದ್ದ ಟಿಮೋತಿ ಹೊಸಮನಿ ಮತ್ತೆ ಹಿಂದೂಗಳಾಗಿದ್ದಾರೆ.
 ಗುರ್ಮಿಟ್ಕಲ್ ತಾಲೂಕಿನ ಕನಿಕಲ್ ಗ್ರಾಮದಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ 55 ವರ್ಷದ ಟಿಮೋತಿಯವರು 5ದಶಕಗಳ ಹಿಂದೆ ತಮ್ಮ ತಂದೆ ತಾಯಿಯರ ಕಾರಣದಿಂದ ಮತಾಂತರಗೊಂಡಿದ್ದು ಈಗ ವಾಪಾಸ್ ಮಾತೃಧರ್ಮಕ್ಕೆ ಮರಳುವ ಮನಸ್ಸಾಗಿದೆ ಎಂದಿದ್ದಾರೆ.
ತಮ್ಮ ತಂದೆ ತಾಯಿಗಳು ಮಾತೃ ಧರ್ಮಕ್ಕೆ ಮತ್ತೆ ಮರಳಿ ಬರಲು ವಿರೋಧಿಸಿದ್ದರಿಂದ ಅವರ ಮರಣಾ ನಂತರ ಘರ್‌ವಾಪಸಿಯಾಗಲು ನಿರ್ಧರಿಸಿದ್ದು, ಯಾವ ಕಾರಣಕ್ಕೆ ಮತಾಂತರಗೊಂಡಿದ್ದರು ಎಂಬುದು ತಿಳಿದಿಲ್ಲವೆಂದು ಆದರೆ ತಮ್ಮ ಮಕ್ಕಳು ಹಿಂದೂಗಳಾಗಿ ಬಾಳಲು ಇಚ್ಚಿಸಿದ್ದಾರೆ ಎಂದಿದ್ದಾರೆ ಟಿಮೋತಿ.

ಈ ಹಿಂದೆ ಪರಿಶಿಷ್ಟ ಜಾತಿಗೆ ಸೇರಿದ್ದೆವೆಂದು ಹೇಳಿದ್ದಾರೆ.ಟಿಮೋತಿಯವರ ಹಿರಿಯ ಪುತ್ರ ಬೆಂಗಳೂರಿನಲ್ಲಿ ಕೂಲಿ ಮಾಡುತ್ತಿದ್ದು ಇನ್ನಿಬ್ಬರು ಸದ್ಯ ವ್ಯಾಸಂಗನಿರತರಾಗಿದ್ದಾರೆ.ಸರಳವಾದ ಸಮಾರಂಭದಲ್ಲಿ ಜನ್ನಾಪುರದ ರಾಮಭಜನಾಮಂದಿರದಲ್ಲಿ ಟಿಮೋತಿ ಹೊಸಮನಿ ತಮ್ಮ ಪತ್ನಿ ಹಾಗು ಪುತ್ರರ ಸಮೇತ ಘರ್‌ವಾಪಸಿಯಾಗುತ್ತಿದ್ದಾರೆ.


Viewing all articles
Browse latest Browse all 1926

Trending Articles



<script src="https://jsc.adskeeper.com/r/s/rssing.com.1596347.js" async> </script>